ನಿನ್ನ ನಯನ ಕಂಡು ನಾನು ಮಾರು ಹೋದೆನು
ನಿನ್ನ ತುಂಟಾಟ ಕಂಡು ಮೌನಿ ಯಾದೆನು
ಎಂದೂ ಕಾಣದ ನಗೆಯ ಇಂದು ಕಂಡೆನು
ನಿನ್ನ ಹೃದಯ ಜೈಲಿನಲ್ಲಿ ಬಂದಿಯಾದೆನು
ಹೇಳೇ ಹುಡುಗಿ ನೀ ಯಾರು?
ಸೂರ್ಯನ ನಗುವಿನಲ್ಲಿ ನಿನ್ನ ನಾ ಕಂಡೆನು
ಚಂದ್ರನ ಬಿಂಬದಲ್ಲಿ ನಿನ್ನ ಕಂಡೆನು
ದೇವರ ತೆರಿನಲ್ಲೂ ನಿನ್ನ ನಾ ಕಂಡೆನು
ನೀರಿನ ಅಲೆಯಲ್ಲೂ ಕಂಡೆ ನಿನ್ನನು
ಹೇಳೇ ಹುಡುಗಿ ನೀ ಯಾರು?
ನವಿಲಿನ ನಾಟ್ಯದಲ್ಲಿ ನಿನ್ನ ನಾ ಕಂಡೆನು
ಹಂಸದ ನಡುಗೆಯಲ್ಲಿ ನಿನ್ನ ಕಂಡೆನು
ಜಿಂಕೆಯ ಓಟದಲ್ಲಿ ನಿನ್ನ ನಾ ಕಂಡೆನು
ಮೊಲದ ಮುಗ್ದತೆಯಲ್ಲಿ ನಿನ್ನ ಕಂಡೆನು
ಹೇಳೇ ಹುಡುಗಿ ನೀ ಯಾರು?
ಸೋಮವಾರ, ಮಾರ್ಚ್ 30, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)